ಮ್ಯಾಥ್ಯೂ ಲ್ಯಾಂಗ್ಫೋರ್ಡ್ ಪೆರ್ರಿ(1969-2023) ಒರ್ವ ಆಂಗ್ಲಭಾಷಾ ನಟ. ದೂರದರ್ಶನ ಹಾಸ್ಯ ಸರಣಿ ಫ್ರೆಂಡ್ಸ್ ನಲ್ಲಿನ ಇವರ ಚಾಂಡ್ಲರ್ ಬಿಂಗ್ ಪಾತ್ರದಿಂದ ಬಹಳ ಪ್ರಸಿದ್ದಿಗಳಿಸಿದರು. ಇವರು ಹಲವಾರು ಚಲನಚಿತ್ರಗಳಲ್ಲಿಯು ಸಹ ನಟಿಸಿದ್ದಾರೆ. == ಆರಂಭಿಕ ಜೀವನ == ಪೆರ್ರಿ ಅವರು ಮ್ಯಾಸಚೂಸೆಟ್ಸ್ನ ವಿಲಿಯಂಸ್ಟೌನ್ನಲ್ಲಿ ಜನಿಸಿದರು. ಅವರ ತಾಯಿ, ಸುಝೇನ್ ಮೇರಿ ಮಾರಿಸನ್, ಕೆನೆಡ ಪತ್ರಕರ್ತೆ ಮತ್ತು ಕೆನಡ ಪ್ರಧಾನಿ ಪಿಯರೆ ಟ್ರುಡೆವ್ ಅವರ ಮಾಜಿ ಪತ್ರಿಕಾ ಕಾರ್ಯದರ್ಶಿ ಆಗಿದ್ದರು. ಅವರ ತಂದೆ, ಜಾನ್ ಬೆನೆಟ್ ಪೆರ್ರಿ (ಜನನ 1941), ಒಬ್ಬ ಅಮೇರಿಕನ್ ನಟ ಮತ್ತು ಮಾಡೆಲ್ ಆಗಿದ್ದರು. == ವೈಯಕ್ತಿಕ ಜೀವನ == ಪೆರ್ರಿ ಅವರು ಅಮೆರಿಕ ಮತ್ತು ಕೆನಡಾ ಎರಡರ ಪೌರತ್ವವನ್ನು ಹೊಂದಿದ್ದಾರೆ. ಅವರು 1995 ರಿಂದ 1996 ರವರೆಗೂ ಜೂಲಿಯಾ ರಾಬರ್ಟ್ಸ್ ಮತ್ತು 2006 ರಿಂದ 2012ರವರೆಗೂ ಲಿಜ್ಜಿ ಕ್ಯಾಪ್ಲಾನ್ರನ್ನು ಡೇಟಿಂಗ್ ಮಾಡಿದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮ್ಯಾಥ್ಯೂ ಪೆರ್ರಿ ಐ ಎಮ್ ಡಿ ಬಿನಲ್ಲಿ